top of page

ಮಹಾಭಾರತ - ಬದಲಾಗದಿರಲಿ ಮೂಲ ಚಿಂತನೆ.

Writer: biopassionatebiopassionate

ಮಹಾಭಾರತ, ಜಗತ್ತು ಕಂಡ ಮಹಾಕಾವ್ಯಗಳಲ್ಲಿ ಒಂದು. ಹಿಂದುಗಳ ಪವಿತ್ರ ಗ್ರಂಥ. ಮಹಾಭಾರತದಲ್ಲಿ ಬರುವ ಒಂದೊಂದು ಸನ್ನಿವೇಶಗಳನ್ನು ನಾವು ಪಠ್ಯಗಳಲ್ಲಿ ಓದಿರುತ್ತೇವೆ, ಅದರಲ್ಲಿ ಬರುವ ಪ್ರತಿ ಪಾತ್ರಗಳು ನಮ್ಮ ಜೀವನದ ಹಾಸುಹೊಕ್ಕಾಗಿವೆ.



ಸಾವಿರಾರು ವರ್ಷಗಳ ಕಾಲ ಸತತವಾಗಿ ಲೇಖಕ, ವಿಮರ್ಶಕ ಮಹಾಶಯರ ಲೇಖನಿಗೆ ಸಿಲುಕಿ ಮಹಾಭಾರತ ಹಲವಾರು ಆಯಾಮಗಳನ್ನ ಪಡೆದು ಕೊಂಡಿದೆ. ದುಷ್ಟತೆಯನ್ನು ಕೊಂಡಾಡುವುದು 21ನೇ ಶತಮಾನದ ಪ್ರವೃತ್ತಿಯಾಗಿ ಹೋಗಿದೆ. ಅನೇಕ ಲೇಖನಗಳು, ಸಿನಿಮಾಗಳು ದುಷ್ಟತೆ (ಕೌರವ) ಯನ್ನು ತಮ್ಮ ಕಥಾವಸ್ತುವನ್ನಾಗಿಸಿವೆ. ಇದನ್ನೆ ಇವತ್ತು Modern Term ನಲ್ಲಿ Controversial celebrity ಎನ್ನಲಾಗುತ್ತೆ.


ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾದ ಪೌರಾಣಿಕ ಚಿತ್ರ ಕುರುಕ್ಷೇತ್ರ ವನ್ನು ನೋಡಿದವರಿಗೆ ದುರ್ಯೋಧನನ ಮೇಲೆ ಕ್ರಷ್ ಆದರು ಸಂದೇಹವಿಲ್ಲ. ಧರ್ಮದ ಪ್ರತೀಕವಾದ ಪಾಂಡವರ ಪಾತ್ರಗಳನ್ನ ಹಾಗೆ ಗಾಳಿಯಲ್ಲಿ ತೇಲಿಬಿಡಲಾಗುತ್ತೆ.

ಹಾಗೆಯೆ 2013-14 ರಲ್ಲಿ ಬಿತ್ತರಗೊಂಡ "ಮಹಾಭಾರತ" ಹಿಂದಿ ಧಾರವಾಹಿ ಬಹಳಷ್ಟು ಪ್ರಶಂಸೆಗೆ ಪಾತ್ರವಾಯಿತು. ಆ ಧಾರವಾಹಿಯಲ್ಲಿ ನಟಿಸಿದ ಪ್ರತಿ ನಟರು ಜನಮಾನಸಗೊಂಡರು.

ಇದನ್ನ ಇಲ್ಲಿ ಏಕೆ ಪ್ರಸ್ತಾಪ ಮಾಡುತ್ತದೇನೆಂದರೆ, ಇದೆ ಧಾರವಾಹಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳಿಗೂ ಅನುವಾದಗೊಂಡಿತು.

ಈಗ ಕನ್ನಡದಲ್ಲೂ ಕೂಡಾ ಬಿತ್ತರವಾಗುತ್ತಿದೆ. ಸುಮಾರು 100 ಕೋಟಿ ವೆಚ್ಚದಲ್ಲಿ ತಯಾರಾದ ಈ ವೈಭವೋಪೇತ ಧರ್ಮಾಧಾರಿತ ಧಾರವಾಹಿ ನೋಡುಗರ ಕಣ್ಮನ ತಣಿಸುತ್ತದೆ.

ಈಗ ನನ್ನ ಬರಹದ ಪ್ರಮುಖ ಉದ್ದೇಶಕ್ಕೆ ಬರುತ್ತೇನೆ.

ಈ ಧಾರವಾಹಿಯನ್ನ ಮೂಲ ಗ್ರಂಥಕ್ಕೆ ಧಕ್ಕೆ ಬರದ ಹಾಗೆ ಯಥಾವತ್ತಾಗಿ ನಿರೂಪಿಸಲಾಗಿದೆ, ಧರ್ಮದ ಪರಿಚಯ ಮಾಡಲಾಗಿದೆ, ಎಲ್ಲಾ ಪಾತ್ರಗಳನ್ನು ಮಿತಿಯಲ್ಲಿ ಇಡಲಾಗಿದೆ‌...


ಮಹಾಭಾರತ ಧಾರವಾಹಿಯ ಎಲ್ಲಾ ತುಣುಕುಗಳನ್ನು ನೋಡಿದ ನಂತರವೇ ಈ ವಿಮರ್ಶೆ ಬರೆಯಲಾಗುತ್ತಿದೆ.

ಪೋಷಕರಾದ ನೀವು ನೋಡುವುದರ ಜೊತೆಗೆ ಮಕ್ಕಳಿಗೂ ಧರ್ಮ ದರ್ಶನ ಮಾಡಿಸಿ.

 
 
 

Comments


bottom of page