top of page

ವಿಜಯದಶಮಿ ಮತ್ತು ಆಯುಧ ಪೂಜಾ


ಜಗತ್ತಿನ ವಿಶ್ವಗುರು, ಭೂ ಲೋಕದ ಸಾಂಸ್ಕೃತಿಕ ರಾಯಭಾರಿ, ಧನಾತ್ಮಕ ಚಿಂತನೆಗಳ ಮತ್ತು ಚಿಂತಕರ ಗಣಿ ಭಾರತ.

ಭಾರತ ಇಡೀ ವಿಶ್ವದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಸಂಸ್ಕೃತಿ, ಕಲೆ, ತಂತ್ರಜ್ಞಾನ ಹೀಗೆ ಹಲವು... ಭಾರತ ವಿಶಿಷ್ಟ ಎನಿಸೋದು ಇಲ್ಲೇ, ಇಲ್ಲಿ ನಡೆಯುವ ಹಬ್ಬಗಳ ವೈಭವ ಕಣ್ಣಿಗೆ ಸ್ವರ್ಗವೇ ಸರಿ.

ಭಾರತೀಯರು ಆಚರಿಸುವ ಹಲವಾರು ಹಬ್ಬಗಳ ಪೈಕಿ ವಿಜಯದಶಮಿ ಮತ್ತು ಆಯುಧ ಪೂಜಾ ಹಬ್ಬವು ಕೂಡ ಒಂದು.



ದೇಶದ ಹಲವೆಡೆ ಹಲವಾರು ರೀತಿಯಲ್ಲಿ ಹಲವು ಕಾರಣಗಳಿಗಾಗಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ದೇಶದ ಹಲವೆಡೆ ಹಲವಾರು ರೀತಿಯಲ್ಲಿ ಹಲವು ಕಾರಣಗಳಿಗಾಗಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ.

ದಕ್ಷಿಣ ಭಾರತದಲ್ಲಿ, ದುರ್ಗಾದೇವಿ ಧರ್ಮಸಂಸ್ಥಾಪನೆಗಾಗಿ ಮಹಿಷಾಸುರನನ್ನು ಮರ್ಧಿಸಿದ ಸಂಭ್ರಮಾಚರಣೆಯನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ.



ಮೈಸೂರಿನಲ್ಲಿ ನಡೆಯುವ ದಸರಾ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಮೈಸೂರಿನಲ್ಲಿ ನಡೆಯುವ ದಸರಾ ಹಬ್ಬವನ್ನು ನೋಡಲು ಜಗತ್ತಿನ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.



ಉತ್ತರಭಾರತದಲ್ಲಿ, ಶ್ರೀರಾಮ, ರಾವಣನ ವಿರುದ್ಧ ವಿಜಯ ಸಾಧಿಸಿ ತನ್ನ ಅಯೋಧ್ಯೆಗೆ ಮರಳಿದ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಪುರಾಣದಲ್ಲಿ ಉಲ್ಲೇಖಿತವಾಗಿರುವಂತೆ, ಶ್ರೀರಾಮ ವಿಜಯ ಸಾಧಿಸಿ ತನ್ನ ತವರಿಗೆ ಮರಳಲು ಹತ್ತು ದಿನಗಳಾದವು. ಆ ಒಂಬತ್ತು ರಾತ್ರಿಗಳ ಸಂಭ್ರಮವನ್ನು ನವರಾತ್ರಿ ಎಂದು ಆಚರಿಸಲಾಗುತ್ತದೆ.



ವಿಜಯದಶಮಿ ಎಂಬುದು ಅಧರ್ಮದ ವಿರುದ್ಧ ಧರ್ಮದ ಜಯ ಎಂಬುದನ್ನು ಸೂಚಿಸುತ್ತದೆ.

"These are the examples of victory of good over evil"
109 views0 comments

Recent Posts

See All
bottom of page